ಇದೆಲ್ಲಾ-ಸುರುಅಗಿದ್ದೆ-ಇಲ್ಲಿಂದ

 ಇದೆಲ್ಲಾ ಶೂರುರುಅಗಿದ್ದೆ ಇಲ್ಲಿಂದ..
 ೨೮ ವರ್ಷಗಳ ಹಿಂದೆ ಬನ್ನೂರು ಎಂಬ ಚಿಕ್ಕ ಗ್ರಾಮದಲ್ಲಿ ನಡೆದ ಒಂದು ಪ್ರಸಂಗ.
ಆ ಊರಿನಲ್ಲಿ ಏನಕ್ಕೂ ಕೊರತೆ ಇದ್ರೂ ಸುಂದರವಾದ ಹೆಣ್ಣು ಮಕ್ಳುಗೆ ಕೊರತೆ ಇಲ್ಲ ನೋಡ್ರಿ ಇದ್ದಕ್ಕೆ ಸಾಕ್ಷಿ ಆಗಿ ನಮ್ಮ ಅಜ್ಜಿ, ನಮಮ್ಮ ಹಾಗು ಅಕ್ಕಂದ್ರು.
  ಜೂನ್ ೩, ೧೯೮೪ . ಒಬ್ಬ ಸುಂದರವಾದ ಹೆಂಗಸು ಹುಸ್ಹ್ರು ಬಿಗಿ ಹಿಡಿದು ನನ್ನ ಜನ್ಮಕ್ಕೆ ಹಾಗು ಅವಳ ಮರುಜನ್ಮಕ್ಕೆ ಕಾಯ್ತಾ ಇದ್ಲು ಮಧ್ಯಾನ್ಹ ೨.೩೦ ರ ಹೊತ್ತಿಗೆ ಒಂದು ಮಗು ಅಳೋದಕ್ಕೆ ಶೂರು ಮಾಡ್ತು. ಹೌದು ಅದು ಸಾಕ್ಷಾತ್ ನಾನೇ ಹುಟ್ಟಿದು ನಮ್ಮಮ್ಮ ಹುಸಿರಡೋಕೆ ಶೂರು ಮಾಡಿದ್ಲು ನನ್ ಜೊತೆ.
ಎಲ್ರು ಖುಷಿಯಗಿದ್ರು, ನಾನು ಕೂಡ, ನಂಗೆ ಯಾವಾಗ ಹುಟ್ಟಿದಿನಿ ಅಂದ್ಥ ಗೊತ್ತಾಗಿ ಅದರಲ್ಲೂ ಹುಡುಗ ಅಂತ ಗೊತ್ತಾದಾಗ !!
ಆದ್ರೆ ಏನ್ ಮಾಡೋದು ಎಲ್ಲ ಖುಷಿಗು ಒಂದು ಕೊನೆ ಅಂತ ಇರುತಲ್ಲ ಹಾಗೆ ನಂಗು ಕೂಡ ನನ್ನ ೨೩ ವಯಸ್ಸಿನಲ್ಲಿ,  ಅದನ್ನ ನನ್ನ ಮುಂದಿನ ಪೋಸ್ಟ್ ಗಳಲ್ಲಿ ಹೇಳ್ತೀನಿ..
ನಾನು ನನ್ನಮ್ಮಂಗೆ ಪುಟ್ಟಾಣಿ ಹೀರೋ, ತಾತ, ಅಪ್ಪ ಆದ್ಮೇಲೆ ( ಅವಾಗ್ ಅವಾಗ ವಿಲ್ಲನ್ ಕೂಡ  ಯಾಕಂದ್ರೆ ಇಬ್ರು ದಂಪತಿ ಗಳಲ್ವ ಅದ್ಕೆ ) .
ಒಮ್ಮೊಮೆ ನಾನು ಹೆಣ್ಣು ಮಗು ಆಗಿ ಹುಟ್ಟಿದ್ರೀ ಏನೇನು ಹಗಿರ್ತಿತು ಅಂತ..?? !!!.
ಒಂದು ಮಹಾಲಕ್ಷ್ಮಿ ಹುಟ್ಟಿದಳು ಅಂತ ಸಾಂಪ್ರದಾಯಿಕವಾಗಿ ಎಲ್ಲರ ಮುಂದೆ ಅಸಹಜ ಹುಸಿ ನಗು ಬಿರ್ತ್ತಾ ಇರೋರು, ಉರಿತಿರೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ ೯೯% ಸಂಭಂದಿಕ್ರು ಮಹಾಲಕ್ಷ್ಮಿ ಪಡೆದೆಯಲ್ಲ ಅಂತ ತುಪ್ಪ ಸುರ್ದಿರೋರು.
ಏನ್ ಮಾಡೋದ್ ಹೇಳ್ರಿ ಹೇಗೆ ಹುಟ್ಟಿದ್ರು ಕಷ್ಟ.
ವಯಸ್ಸಿ ಬಂದಾಗ ಹುಡುಗ್ರು ಗೆ ಸಂಪಾದನೆ ಮಾಡಿ ಉಳಿಸೋದು ಕಷ್ಟ.
ಹುಡ್ಗಿರ್ಗೆ ಏನೇನೊ ಕಷ್ಟ ಪಾಪ.
ನೋಡಿ ಸ್ನೇಹಿತ್ರ ( ನಂಗೆ ಕ್ಲೋಸ್ ಅಗಿರೋರ್ಗೆ, ನನ್ ಮಕ್ಳಾ )…
ನಿಮಗೂ ನಿಮ್ ಅಪ್ಪ ಅಮ್ಮ , ಅಜ್ಜಿ, ತಾತ ನಿಮ್ಮ ಹುಟ್ಟಿನ ಸಂಗತಿ ಗಳ್ಳನ್ನ ಹೇಳಿರ್ತಾರೆ ಅದನ್ನೆಲ್ಲಾ ನಮ್ ಜೊತೆ ಹಂಚ್ಕೊಳ್ಳಿ   ನಾವು ಸ್ವಲ್ಪ ತಿಳ್ಕೊಳ್ಳೋಣ.
ಕಾಯ್ತಾ ಇದೀನಿ…. 🙂

One comment

Leave a comment